ಅಭಿಪ್ರಾಯ / ಸಲಹೆಗಳು

ಲಂಬಾಣಿ ಕುಣಿತ

ಕರ್ನಾಟಕದ ಬುಡಕಟ್ಟಿನ ಲಂಬಾಣಿಗಳದ್ದು ಒಂದು ವಿಶಿಷ್ಟ ಸಂಸ್ಕೃತಿ. ರಂಗುರಂಗಿನ ಈ ಜನ ಶತಮಾನಗಳಿಂದ ತಮ್ಮ ವಿಶಿಷ್ಟ  ಸಂಸ್ಕೃತಿ, ಪರಂಪರೆಯನ್ನು ಕಾಯ್ದುಕೊಂಡು ಬಂದಿದ್ದಾರೆ.

ಸುಂದರವಾದ ಮೈಕಟ್ಟು, ಮೈತುಂಬ ಆಭರಣ, ಕೈತುಂಬ ಸಾರಂಗದ ಕೋಡಿನ  ಬಳೆಗಳು, ವರ್ಣರಂಜಿತ ವೇಷ ಭೂಷಣಗಳನ್ನು ಧರಿಸುವ ಲಂಬಾಣಿಗಳು ಪ್ರತಿಯೊಬ್ಬರನ್ನು  ಆಕರ್ಷಿಸುತ್ತಾರೆ. ವಿಶಿಷ್ಟ ಸಂಸ್ಕೃತಿ- ಪರಂಪರೆಯನ್ನುಳ್ಳ ಇವರನ್ನು ಬಂಜಾರ, ಲಂಬಾಡಿ, ಲಂಬಾಣಿ,ಲಮಾಣಿ, ಸುಗಾಲಿ ಮೊದಲಾದ ಹೆಸರುಗಳಿಂದಲೂ ಕರೆಯುತ್ತಾರೆ.

ನರ್ತನ ಗೀತೆಗಳು ಲಂಬಾಣಿಗರ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿವೆ. ಹಾಗೆಯೇ ಕುಣಿತದ ನಾನಾ ಭಂಗಿಗಳಿಂದ ಜೀವನದ ನೋವು – ನಲಿವು, ಹಿಗ್ಗು – ಉತ್ಸಾಹ, ಕೋಪ- ತಾಪ, ಮರುಕ – ಸಂತಾಪ ಮೊದಲಾದವುಗಳನ್ನು ಪ್ರದರ್ಶಿಸಿ ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತಾರೆ.

ಲಂಬಾಣಿ ಸ್ತ್ರೀಯರ ಕುಣಿತದ ರೀತಿ ಬಹು ಆಕರ್ಷಣೀಯವಾಗಿರುತ್ತದೆ. ಸ್ತ್ರೀಯರ ಕುಣಿತಗಳಲ್ಲಿ  ಅನೇಕ ವಿಧಿ- ವಿಧಾನ ಕ್ರಮಗಳಿವೆ. ವೃತ್ತಾಕಾರವಾಗಿ ನಿಂತು ವಿವಿಧ ಭಂಗಿಗಳಲ್ಲಿ ಕುಣಿಯುತ್ತಾರೆ. ಕೆಲವೊಮ್ಮೆ ಕುಣಿಯುವಾಗ ತಾವೇ ಲಯಬದ್ಧವಾಗಿ ಹಾಡಿಕೊಳ್ಳುತ್ತಾರೆ. ಯಾವ ಹಿಮ್ಮೇಳದ ಅವಶ್ಯಕತೆಯೂ ಇಲ್ಲಿಲ್ಲ. ಸಾಮಾನ್ಯವಾಗಿ ಪ್ರಾರ್ಥನೆಯೊಂದಿಗೆ ಇವರ ಸಾಮೂಹಿಕ ಕುಣಿತ ಆರಂಭಗೊಳ್ಳುತ್ತದೆ. ಆನಂತರ ಬೇರೆ ಬೇರೆ ಪೌರಾಣಿಕಾಂಶಗಳೊಂದಿಗೆ ದೇವಾದಿ – ದೇವತೆಗಳನ್ನು ಕುರಿತು  ಹಾಡುತ್ತ ಕುಣಿಯುತ್ತಾರೆ.  ಕುಣಿತದಲ್ಲಿ ಕೈಕಾಲು, ಸೊಂಟಗಳಿಗೆ ಹೆಚ್ಚಿನ ಶ್ರಮವಿರುತ್ತದೆ. ಕೆಲವೊಮ್ಮೆ ಕುಣಿತಕ್ಕೆ ಹಿಮ್ಮೇಳವಾಗಿ ಹಲಗೆ, ನಗಾರಿ ಮೊದಲಾದ ವಾದ್ಯಗಳನ್ನು ಉಪಯೋಗಿಸುತ್ತಾರೆ.

ಸಾಮಾನ್ಯವಾಗಿ ಅವರು ತಮ್ಮ ಹಬ್ಬ – ಉತ್ಸವ, ಜಾತ್ರೆ, ಮದುವೆ ಹಾಗೂ ಸಂತೋಷ ಸಮಾರಂಭಗಳಲ್ಲಿ ಗೀತೆ, ನೃತ್ಯಗಳನ್ನು ಮಾಡುತ್ತಾರೆ.

ಲಂಬಾಣಿ ನೃತ್ಯಕ್ಕೆ ಸಂಬಂಧಿಸಿದ ಛಾಯಾಚಿತ್ರಗಳ ಲಿಂಕ್‌

 

   

 

ಇತ್ತೀಚಿನ ನವೀಕರಣ​ : 11-08-2023 12:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080